{"product_id":"2940153929651","title":"Karala Garbha","description":"\u003cp\u003eವಿಜಯ್ ಮತ್ತು ವಿಕ್ರಮ್ ಎಂಬ ಪತ್ತೇದಾರರ ಬಳಿ ಬೇಡ ಬೇಡವೆಂದರೂ ಅವನ ಮಾಜಿ ಕಕ್ಷಿದಾರ ವಿಶಾಲ್ ಕಪೂರ್ ಎಂಬ ಕಿರುತೆರೆಯ ಮುಖ್ಯ ನಿರ್ಮಾಪಕ ಇಂದಿನ ಕಿರುತೆರೆಯ ಧಾರಾವಾಹಿಗಳ ಜನಪ್ರಿಯ ನಾಯಕಿ ಪಾತ್ರಧಾರಿ ಮೃದುಲಾ ಹೊಸಮನಿ ಎಂಬಾಕೆಯನ್ನು ಇವನ ಸಲಹೆ ಮತ್ತು ತನಿಖೆಗಾಗಿ ಕಳಿಸುತ್ತಾನೆ.\u003cbr\u003eಮೃದುಲಾ ತನ್ನ ಹಿನ್ನೆಲೆಯನ್ನು ತಿಳಿಸುತ್ತಾ ತಾನು ಒಬ್ಬ ದತ್ತು ಪುತ್ರಿಯೆಂದೂ , ಸಾಕು ತಂದೆತಾಯಿಗಳ ಪಾಲನೆಯಲ್ಲಿ ಹುಟ್ಟಿದಂದಿನಿಂದ ಬೆಳೆದೆನೆಂದೂ, ಇತ್ತೀಚೆಗೆ ಅವರೂ ಮಡಿದು ತಾನು ತಬ್ಬಲಿಯಾದೆನೆಂದೂ ತಿಳಿಸುವಳು…\u003cbr\u003eಸದ್ಯಕ್ಕೆ ತನ್ನ ಧಾರಾವಾಹಿಯಲ್ಲಿ ತನ್ನ ಪಾತ್ರಧಾರಿ ಒಂದು ದತ್ತು ಮಗುವನ್ನು ಪಡೆಯುವ ಸನ್ನಿವೇಶ ಬರುತ್ತದೆಯೆಂದೂ ಹೇಳಿ ತನ್ನ ಒಂದು ಸಮಸ್ಯೆಯನ್ನು ವಿಜಯ್ ಮುಂದಿಡುತ್ತಾಳೆ.\u003cbr\u003eಆಕೆಯ ಹುಟ್ಟು ತಂದೆತಾಯಿಗಳ ಪತ್ತೆ ಮಾಡಿಕೊಡಬೇಕೆಂದೂ,. ತನ್ನ ಜನ್ಮದಾತರ ಬಗ್ಗೆ ಯಾವುದೋ ರಹಸ್ಯವನ್ನು ತಿಳಿದ ಒಬ್ಬ ಆ ಮಾಂಡಿಚೆರ್ರಿ ಊರಿನ ಖದೀಮನೊಬ್ಬ ತನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆಂದೂ ಅದಕ್ಕಾಗಿ ವಿಜಯ್‍ನಂತಾ ಪತ್ತೇದಾರನನ್ನು ತಾನು ಬಾಡಿಗೆಗೆ ತೆಗೆದುಕೊಳ್ಳು ತ್ತಿರುವುದಾಗಿ ತಿಳಿಸುತ್ತಾಳೆ.\u003cbr\u003eವಿಜಯ್‍ಗೆ ಮೃದುಲಾ ಲಾಯರ್ ಕಡೆಯವಳಾದ ಲೂಸಿ ಎಂಬ ಸುಂದರಿ ಯುವ ಲಾಯರ್ ಆ ಮಾಂಡಿಚೆರ್ರಿ ಊರಿನಲ್ಲಿ ಸಹಾಯಕ್ಕೆ ನಿಲ್ಲುತ್ತಾಳೆ…\u003cbr\u003eಒಂದೊಂದು ಸುಳಿವನ್ನೂ ಗುಪ್ತವಾಗಿ ತನಿಖೆ ಮಾಡಿದಂತೆ ವಿಜಯ್‍ಗೆ ಈ ಕೇಸ್ ಸಾಮಾನ್ಯವಾದದ್ದಲ್ಲವೆಂದೂ ದೊಡ್ಡ ರಹಸ್ಯ ಮತ್ತು ಮೂರುವರೆ ದಶಕಗಳ ಹಿಂದಿನ ಸಂಚು ಈ ಜನ್ಮದಾತರ ಬಗ್ಗೆ ಅಡಗಿದೆಯೆಂದೂ ಅರಿವಾಗುತ್ತಾ ಹೋಗುತ್ತದೆ.\u003cbr\u003eಆದರೆ ಈ ಊರಿನಲ್ಲಿ ತನಿಖೆಗೆ ಬಂದ ವಿಜಯ್‍ಗೆ ಪ್ರಾಣಾಪಾಯ ತಪ್ಪಿದ್ದಲ್ಲಾ…ಈ ಜನ್ಮ ರಹಸ್ಯದ ಅನ್ವೇಷಣೆ ಯಾರಿಗೆ ಆ ಊರಿನಲ್ಲಿ ಬೇಡವಾಗಿದೆ?..\u003cbr\u003eಅವರೂ ಅದಕ್ಕಾಗಿ ಏನು ಬೇಕಾದರೂ ಮಾಡಲು ಹೇಸುವುದಿಲ್ಲವೆ?..\u003c\/p\u003e\u003cp\u003eಹೀಗೆ ಕ್ಷಣ ಕ್ಷಣಕ್ಕೂ ರೋಚಕ ತಿರುವುಗಳನ್ನು ಒಳಗೊಂಡ ಪತ್ತೇದಾರಿ ಕೇಸಿನಲ್ಲಿ ಕೊನೆಗೆ ಯಾರಿಗೆ ಜಯ?..ಕೊನೆಗೂ ಅಪರಾಧಿ ಸಿಕ್ಕಿಬಿದ್ದನೆ?...ಮೃದುಲಾ ತನ್ನ ಹೆತ್ತಮ್ಮ- ಅಪ್ಪನನ್ನು ಭೇಟಿ ಮಾಡಿದಳೆ?...\u003cbr\u003eರೋಮಾಂಚಕ ತಿರುವುಗಳೊಂದಿಗೆ ಅಂತ್ಯ…\u003c\/p\u003e","brand":"Nagesh Kumar CS","offers":[{"title":"Default Title","offer_id":47167006834928,"sku":"2940153929651","price":0.99,"currency_code":"USD","in_stock":true}],"thumbnail_url":"\/\/cdn.shopify.com\/s\/files\/1\/0737\/7593\/9824\/files\/2940153929651_p0.jpg?v=1764064146","url":"https:\/\/shop-qa.barnesandnoble.com\/products\/2940153929651","provider":"Barnes \u0026 Noble (DEV)","version":"1.0","type":"link"}